ಆರೋಗ್ಯಕರ ಹಾಗೂ ರುಚಿಕರ.

Kannada Recipe: ಹೋಟೆಲ್ ಶೈಲಿಯಲ್ಲಿ ಅದಕ್ಕಿಂತ ಅದ್ಭುತವಾಗಿ ಖಾಲಿ ದೋಸೆ ಹಾಗೂ ವಿಶೇಷ ಚಟ್ನಿ ಮಾಡುವುದು ಹೇಗೆ ಗೊತ್ತೇ??

122

Get real time updates directly on you device, subscribe now.

Kananda Recipe: ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಸ್ಟೈಲ್ ನಲ್ಲಿ ಖಾಲಿ ದೋಸೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ.

Kannada Recipe ಖಾಲಿ ದೋಸೆ, ಆಲೂಗಡ್ಡೆ ಪಲ್ಯ ಹಾಗೂ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 2 ಲೋಟ ಅಕ್ಕಿ, 1 ಲೋಟ ಕುಸುವಲಕ್ಕಿ, ಅರ್ಧ ಲೋಟ ಉದ್ದಿನಬೇಳೆ, ಅರ್ಧ ಲೋಟ ಅವಲಕ್ಕಿ, ಅರ್ಧ ಚಮಚ ಮೆಂತ್ಯ ಕಾಲು, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಎಣ್ಣೆ, ಅರ್ಧ ಚಮಚ ಸಾಸಿವೆ, 1 ಚಮಚ ಉದ್ದಿನಬೇಳೆ, 1 ಚಮಚ ಕಡಲೆಬೇಳೆ, ಸ್ವಲ್ಪ ಕರಿಬೇವು, 4 ಹಸಿಮೆಣಸಿನಕಾಯಿ, ಅರ್ಧ ಇಂಚು ಶುಂಠಿ, 1 ಈರುಳ್ಳಿ, ರುಚಿಗೆ ತಕಷ್ಟು ಉಪ್ಪು, ಕಾಲು ಚಮಚ ಅರಿಶಿನಪುಡಿ, 3 ಆಲೂಗಡ್ಡೆ, ಸ್ವಲ್ಪ ಕೊತ್ತಂಬರಿ ಸೊಪ್ಪು, 3 ಚಮಚ ಉರಿಗಡಲೆ, 3 ಚಮಚ ತೆಂಗಿನಕಾಯಿ ತುರಿ, 2 ಚಮಚ ಕಡಲೆಬೀಜ, 2 ಹಸಿಮೆಣಸಿನಕಾಯಿ, ಅರ್ಧ ಇಂಚು ಶುಂಠಿ, ಸ್ವಲ್ಪ ಹುಣಸೆಹಣ್ಣು.

ಖಾಲಿ ದೋಸೆ ಮಾಡುವ ವಿಧಾನ: ಒಂದು ದೊಡ್ಡ ಬಟ್ಟಲಿಗೆ 2 ಲೋಟ ಅಕ್ಕಿ, 1 ಲೋಟ ಕುಸುಲಕ್ಕಿ, ಅರ್ಧ ಲೋಟ ಉದ್ದಿನಬೇಳೆ, ಅರ್ಧ ಲೋಟ ಗಟ್ಟಿ ಅವಲಕ್ಕಿ, ಅರ್ಧ ಚಮಚ ಮೆಂತ್ಯ ಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ನೀರನ್ನು ಹಾಕಿ ಚೆನ್ನಾಗಿ ತೊಳೆದುಕೊಂಡು ಮತ್ತೆ ನೀರನ್ನು ಹಾಕಿ 5 ಗಂಟೆಗಳ ಕಾಲ ಅಥವಾ ರಾತ್ರಿ ಇಡಿ ನೆನೆಯಲು ಬಿಡಿ. ನಂತರ ಒಂದು ಮಿಕ್ಸಿ ಜಾರಿ ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8 – 10 ಗಂಟೆಗಳ ಕಾಲ ನೆನೆಯಲು ಬಿಡಿ ನಂತರ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಓದಿ. Paddu Recipe: ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವಂತಹ ಸಿಹಿ ಮತ್ತು ಖಾರ ಪಡ್ಡು ಮಾಡುವ ವಿಧಾನ: Crispy Spicy Paddu & Juicy Sweet Paddu | Paddu Batter Recipe

Kannada Recipe: How to make khali dosa
Kannada Recipe: How to make Khali dosa

ಆಲೂಗಡ್ಡೆ ಪಲ್ಯ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಸಾಸಿವೆಯನ್ನು ಹಾಕಿ ಸಿಡಿಯಲು ಬಿಡಿ. ನಂತರ ಇದಕ್ಕೆ 1 ಚಮಚ ಉದ್ದಿನ ಬೇಳೆ, 1 ಚಮಚ ಕಡಲೆ ಬೇಳೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, ತುರಿದ ಶುಂಠಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನಪುಡಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಚಮಚದಷ್ಟು ನೀರನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಬೇಯಿಸಿಕೊಂಡ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡರೆ ಆಲೂಗೆಡ್ಡೆ ಪಲ್ಯ ಸವಿಯಲು ಸಿದ್ಧ.

ಚಟ್ನಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ 3 ಚಮಚ ಹುರಿಗಡಲೆ, 3 ಚಮಚ ಸಣ್ಣಗೆ ಹಚ್ಚಿದ ತೆಂಗಿನ ಕಾಯಿ, 2 ಚಮಚ ಕಡ್ಲೆ ಬೀಜ, 2 ಹಸಿ ಮೆಣಸಿನಕಾಯಿ, 1/2 ಇಂಚು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಹುಣಸೆ ಹಣ್ಣು ಹಾಗೂ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಮಿಕ್ಸ್ ಮಾಡಿಕೊಂಡರೆ ಚಟ್ನಿ ಸವಿಯಲು ಸಿದ್ಧ.

ಕೊನೆಯದಾಗಿ ಗ್ಯಾಸ್ ಮೇಲೆ ತವಾವನ್ನು ಇಟ್ಟು ಸ್ವಲ್ಪ ಎಣ್ಣೆಯನ್ನು ಸವರಿ ಕಾಯಲು ಬಿಡಿ. ನಂತರ ಹಿಟ್ಟನ್ನು ದಪ್ಪವಾಗಿ ಸವರಿಕೊಂಡು ಎರಡು ಬದಿಯಲ್ಲಿ ಬೇಯಿಸಿಕೊಂಡರೆ ಹೋಟೆಲ್ ಶೈಲಿಯಲ್ಲಿ ಖಾಲಿ ದೋಸೆ, ಆಲೂಗಡ್ಡೆ ಪಲ್ಯ ಹಾಗೂ ಚಟ್ನಿ ಸವಿಯಲು ಸಿದ್ಧ.

Get real time updates directly on you device, subscribe now.